ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ‌ ಬಂಧನ

ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ‌ ಬಂಧನ

ಮಧುಗಿರಿ - ರಾಸಲೀಲೆ ವಿಡಿಯೋ ವೈರಲ್ ಪ್ರಕರಣ. ಸಂತ್ರಸ್ತ ಮಹಿಳೆಯಿಂದ ದೂರು ಪಡೆದು ಎಫ್ಐಆರ್ ದಾಖಲಿಕೊಂಡಿದ್ದ ಮಧುಗಿರಿ ಪೊಲೀಸರು.ಡಿವೈಎಸ್ ಪಿ ಯನ್ನ ಬಂಧಿಸಿ ಮಧುಗಿರಿ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ.

ದೂರು ನೀಡಲು ಪೊಲೀಸ್ ಠಾಣೆಗೆ ಬಂದ ಪಾವಗಡ ಮೂಲದ ಮಹಿಳೆಯನ್ನು ಠಾಣೆಯ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ರಾಸಲೀಲೆ ಆಡಿದ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾದ ಬೆನ್ನಲ್ಲೆ. ಪೊಲೀಸ್ ಮಹಾನಿರ್ದೇಶಕರು ಡಿವೈಎಸ್ಪಿ ರಾಮಚಂದ್ರಪ್ಪ ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿ ಸಂತ್ರಸ್ತ ಮಹಿಳೆಯಿಂದ ದೂರು ದಾಖಲಿಸಿದ್ದರು.

ಇದೀಗ ಡಿವೈಎಸ್ಪಿ ರಾಮಚಂದ್ರಪ್ಪ ಅವರನ್ನು ಬಂಧಿಸಿರುವ ಮಧುಗಿರಿ ಪೊಲೀಸರು, ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ನ್ಯಾಯಾಲಯದ ಆವರಣದಲ್ಲಿರುವ ನ್ಯಾಯಾಧೀಶರ ನಿವಾಸದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.